ರಾಜ್ಯದ ಬಿಜೆಪಿ ಶಾಸಕರೊಬ್ಬರ ವಿರುದ್ಧ ಲಂಚದ ಆರೋಪ ಬಲವಾಗಿ ಕೇಳಿಬಂದಿದೆ. ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ವಿರುದ್ಧ ಕಲಬುರಗಿ ಜಿಲ್ಲಾ ಬಿಸಿಎಂ ಅಧಿಕಾರಿ ರಮೇಶ್ ಸಂಗಾ ಎನ್ನೋರು ಲಂಚದ ಆರೋಪ ಮಾಡಿದ್ದಾರೆ.ವರ್ಗಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ ರೇವೂರ್ ಹಾಗೂ ಬಿಸಿಎಂ ಅಧಿಕಾರಿ ನಡುವೆ ಜಟಾಪಟಿ ನಡೆಯುತ್ತಿದೆ. ಕೊರೊನಾ ಸಂದರ್ಭದಲ್ಲಿ ದಿನಸಿ ಕಿಟ್ ನೀಡುವಂತೆ ಹಾಗೂ ಹಣ ನೀಡುವಂತೆ ಶಾಸಕರು ಹಾಗೂ ಅವರ ಸಹಾಯಕ ಒತ್ತಡ ಹಾಕಿದ್ದರು