ಬೆಂಗಳೂರು: ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತ ಪ್ರಕ್ರಿಯೆಗೆ ಸದನ ಪ್ರವೇಶಿಸಿರುವ ಬಿಜೆಪಿ ಶಾಸಕರು ಆಗಲೇ ಅಧಿಕಾರದ ಕನಸು ಕಾಣಲಾರಂಭಿಸಿದ್ದಾರೆ.ಈ ವಿಶ್ವಾಸ ಮತ ಸೋತು ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವುದು ಖಚಿತ ಎಂಬ ನಂಬಿಕೆಯಲ್ಲಿರುವ ಬಿಜೆಪಿ ಶಾಸಕರು ತಮ್ಮ ನಾಯಕ ಬಿಎಸ್ ಯಡಿಯೂರಪ್ಪಗೆ ರಾಜಾಹುಲಿ ಎಂದು ಪಟ್ಟ ಕೊಟ್ಟು ಜೈಕಾರ ಹಾಕುತ್ತಿದ್ದಾರೆ! ಸದನ ಪ್ರವೇಶಿಸುವಾಗ ಬಿಜೆಪಿಯ ಕೆಲವು ಶಾಸಕರು ಯಡಿಯೂರಪ್ಪನವರನ್ನು ರಾಜಾಹುಲಿ ಎಂದು ಜೈಕಾರ ಹಾಕಿದ್ದು ವಿಶೇಷವಾಗಿತ್ತು.ಸದನ ಪ್ರವೇಶಿಸಿದ ತಕ್ಷಣವೇ ಹಾಜರಿ