ಎಲ್ಲರೂ ಒಂದೇ ಮದುವೆ ಆಗಿ, ಎರಡೇ ಮಕ್ಕಳನ್ನು ಮಾಡಬೇಕು ಎಂದು ಮತ್ತೆ ಬಿಜೆಪಿ ಶಾಸಕ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ತಮ್ಮನಾಲಿಗೆಯನ್ನು ಹರಿಬಿಟ್ಟಿದ್ದಾರೆ.ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮನ್ ಸಿವಿಲ್ ಕೋಡ್ ಎಲ್ಲರಿಗೂ ಒಂದೇ ಆಗಬೇಕು. ಮೋದಿಮತ್ತೆ ಪ್ರಧಾನಿ ಆಗಲಿದ್ದು, ಎಲ್ಲರಿಗೂ ಕೋಡ್ ಅನ್ವಯವಾಗುವಂತೆ ಏಕರೂಪದ ಕಾನೂನು ಜಾರಿಗೆ ತರಲಾಗುವುದು ಎಂದರು.ಎಲ್ಲರೂ ಒಂದೇ ಮದುವೆ ಆಗಿ, ಎರಡೇ ಮಕ್ಕಳನ್ನು ಮಾಡಬೇಕು.