ಮೈಸೂರು : ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ . ಸಿದ್ದರಾಮಯ್ಯರದ್ದು ಟ್ರಂಪಾಯಣದ ಕಥೆ, ಸಿದ್ದು ಸೋಲು ಒಪ್ಪಿಕೊಳ್ಳಲ್ಲ, ಗೆಲ್ಲಲೂ ಆಗಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಸೋತರೆ ರಾಹುಕೇತುಗಳು ಸೋಲಿಸಿದರು ಅಂತಾರೆ. ನನ್ನ ಬಿಟ್ಟು ಇನ್ಯಾರೂ ಇರಬಾರದು ಎಂಬ ಮನಸ್ಥಿತಿ. ಸಿದ್ದರಾಮಯ್ಯಗೆ ರಾಜಕೀಯ ಚಡಪಡಿಕೆ ಶುರುವಾಗಿದೆ. ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ. ಬಿಎಸ್ ವೈ ನೋಡಿದ್ರೆ ಸಿಎಂ ಎಂಬ ಮಿಠಾಯಿ ನೆನಪಾಗುತ್ತದೆ. ಸಿದ್ದುಗೆ ಸಿಎಂ ಪಟ್ಟಕ್ಕೇರುವ ಬಯಕೆ ಇದೆ.