ಕೊಡವರು ಗೋಮಾಂಸ ತಿನ್ನುತ್ತಾರೆಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಟಾಂಗ್

ಮೈಸೂರು| pavithra| Last Modified ಶುಕ್ರವಾರ, 25 ಡಿಸೆಂಬರ್ 2020 (11:30 IST)
ಮೈಸೂರು :  ಕೊಡವರು ಗೋಮಾಂಸ ತಿನ್ನುತ್ತಾರೆಂಬ ವಿಪಕ್ಷ ನಾಯಕ ಹೇಳಿಕೆಗೆ ಬಿಜೆಪಿ ಸಂಸದ ಟಾಂಗ್ ನೀಡಿದ್ದಾರೆ.

ನಿಮ್ಮ ಅಕ್ಕಪಕ್ಕದ ಕೊಡವರು ಗೋಮಾಂಸ ತಿನ್ನಬಹುದು. ನೀವು ಗೋಮಾಂಸ ತಿಂದರೆ ಕುರುಬರೆಲ್ಲಾ ತಿನ್ನುತ್ತಾರಾ? ಕುರುಬ ಸಮುದಾಯ ಗೋಮಾಂಸ ತಿನ್ನುತ್ತಾರೆ ಅಂದ್ರೆ ಹೇಗೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗೆ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

ಕೊಡವರು ಗೋಮಾತೆಯನ್ನ 2ನೇ ತಾಯಿಯಾಗಿ ನೋಡ್ತಾರೆ. ಜನರ ಭಾವನೆಗಳಿಗೆ ಧಕ್ಕೆ ಬರುವಂತೆ ಮಾತನಾಡಬೇಡಿ. ಕಾಂಗ್ರೆಸ್ ನವರು ಮಾತ್ರ ಆತ್ಮದ್ರೋಹದ ಮಾತಾಡಲು ಸಾಧ್ಯ. ಕೊಡವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
 


ಇದರಲ್ಲಿ ಇನ್ನಷ್ಟು ಓದಿ :