ಕೊರೊನಾದಿಂದ ಮುಕ್ತರಾದ ಬಿಜೆಪಿ ಸಂಸದರ ಪುತ್ರಿ ಈಗ ಮಾಡ್ತಿರೋದೇನು?

ದಾವಣಗೆರೆ| Jagadeesh| Last Modified ಗುರುವಾರ, 9 ಏಪ್ರಿಲ್ 2020 (19:40 IST)
ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿರುವ ಸಂಸದರೊಬ್ಬರ ಪುತ್ರಿ ಈ ಕೆಲಸ ಮಾಡುತ್ತಿದ್ದಾರೆ.
ದಾವಣಗೆರೆ ಸಂಸದ ಅವರ ಪುತ್ರಿ ಅಶ್ವಿನಿ ಇದೀಗ ಕೋವಿಡ್ -19 ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.> > ಚಿಕಿತ್ಸೆಯ ನಂತರ ಸಂಪೂರ್ಣ ಗುಣಮುಖರಾಗಿದ್ದು, ವೈದ್ಯರ ಸಲಹೆ ಮೇರೆಗೆ  14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರುವ ಅವರು, ಸಾಮಾಜಿಕ ಜಾಲ ತಾಣಗಳ ಮೂಲಕ ತಾವು ಸೋಂಕಿನಿಂದ ಗುಣಮುಖರಾದ ರೀತಿಯ ಕುರಿತು ಮಾಹಿತಿ ನೀಡಿದ್ದಾರೆ.
ತಮಗೆ ಆಸ್ಪತ್ರೆಯಲ್ಲಿ ದೊರೆತ ಚಿಕಿತ್ಸೆ, ಕುಟುಂಬದ ಬೇರೆಯವರಿಗೆ ಸೋಂಕು ತಗುಲದಂತೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ವೈಯಕ್ತಿಕ ಸ್ವಚ್ಛತೆ, ವೈರಾಣು ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳಬಗ್ಗೆ ಮಾಹಿತಿವುಳ್ಳ ವಿಡಿಯೋ ಸಂದೇಶ ಹಂಚಿಕೊಂಡಿದ್ದು ಇದೀಗ ವಿಡಿಯೋ ವೈರಲ್ ಆಗಿದೆ.

ಇದರಲ್ಲಿ ಇನ್ನಷ್ಟು ಓದಿ :