ಬೆಳಗಾವಿ: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವೆಂದರೆ ಬಲವಂತದ ಮದುವೆಯಂತೆ ಎಂದು ಬಿಜೆಪಿ ಸಂಸದ ಸುರೇಶ್ ಅಂಗಡಿ ಲೇವಡಿ ಮಾಡಿದ್ದಾರೆ. ಜನರ ಆಶೀರ್ವಾದವಿದ್ದರೆ ಮತ್ತೆ ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸುರೇಶ್ ಅಂಗಡಿ ಈ ಮೈತ್ರಿ ಸರ್ಕಾರ ಸದ್ಯದಲ್ಲೇ ಪತನಗೊಳ್ಳಲಿದೆ ಎಂದಿದ್ದಾರೆ.ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಸರ್ಕಾರ ಒತ್ತಾಯಪೂರ್ವಕ ಮ್ಯಾರೇಜ್ ರೀತಿ ಆಗಿದೆ. ಈ ಮ್ಯಾರೇಜ್ ಎನಿ ಟೈಮ್ ಡೈವರ್ಸ್