ಬೆಂಗಳೂರು: ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಪಿಎಫ್ ಐ ಮತ್ತು ಕೆಎಫ್ ಡಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಬಿಜೆಪಿ ನಡೆಸಲುದ್ದೇಸಿರುವ ಮಂಗಳೂರು ಚಲೋ ರ್ಯಾಲಿಗೆ ಸಚಿವ ಯುಟಿ ಖಾದರ್ ಕಿಡಿ ಕಾರಿದ್ದಾರೆ. ಮಂಗಳೂರಿನಲ್ಲಿ ಈಗಾಗಲೇ ಶಾಂತಿ ನೆಲೆಸಿದೆ. ಆದರೆ ಬಿಜೆಪಿಯವರು ಈಗ ವೃಥಾ ರ್ಯಾಲಿ ನಡೆಸಿ ಶಾಂತಿ ಕೆಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಮತ್ತಷ್ಟು ಯುವಕರ ಪ್ರಾಣ ತೆಗೆಯಲು ಸಂಚು ನಡೆಸುತ್ತಿದ್ದಾರೆ ಎಂದು ವಿಧಾನಸೌಧದಲ್ಲಿ