Widgets Magazine

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಭಾರೀ ಮುಖಭಂಗ : ಅಭಿನಂದನಾ ಸಮಾರಂಭಕ್ಕೆ ಶಾಸಕರೇ ಗೈರು

ಉಡುಪಿ| Jagadeesh| Last Modified ಮಂಗಳವಾರ, 10 ಸೆಪ್ಟಂಬರ್ 2019 (16:47 IST)
ಬಿಜೆಪಿಯಲ್ಲಿ ಮತ್ತೆ ಸ್ಫೋಟಗೊಂಡಿದೆ. ಕಮಲ ಪಾಳೆಯದಲ್ಲಿ ಆಗಾಗ್ಗೆ ಭಿನ್ನಮತ, ಶಾಸಕರ ನಡುವಿನ ಅಸಹನೆಗಳು ಬೆಳಕಿಗೆ ಬರುತ್ತಲೇ ಇವೆ.

ನಳಿನ್ ಕುಮಾರ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿರೋದಕ್ಕೆ ಉಡುಪಿ ಜಿಲ್ಲೆಯ ಪಕ್ಷದಲ್ಲಿಯೇ ಅಪಸ್ವರ ಕೇಳಿಬಂದಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಕಟೀಲ್ ಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಗೆ ಬಿಜೆಪಿ ಶಾಸಕರೇ ಗೈರು ಆಗಿರೋದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಉಡುಪಿಯಲ್ಲಿ ಬಿಜೆಪಿ ನಳಿನ್ ಕುಮಾರ್ ಕಟೀಲ್ ರನ್ನ ಸನ್ಮಾನಿಸಲಾಯಿತು. ಆದರೆ ಈ ಸಮಾರಂಭದಿಂದ ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ ಶೆಟ್ಟಿ ದೂರ ಉಳಿಯೋ ಮೂಲಕ ಕಮಲ ಪಡೆಯ ಆಂತರಿಕ ಸ್ಫೋಟ ಬಹಿರಂಗವಾಗುವಂತೆ ಮಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :