ಬೆಂಗಳೂರು: ಪ್ರಧಾನಿ ಮೋದಿ ಮೇಲೆ ಕಿಡಿ ಕಾರುವಾಗ ಎಡವಟ್ಟು ಮಾಡಿಕೊಂಡ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ರಮ್ಯಾ ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರುವಾಗ ಅವರನ್ನು ಭೂತಕ್ಕೆ ಹೋಲಿಸಿದ್ದಾರೆ ಎನ್ನಲಾಗಿದೆ. ಇದು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿದೆ.ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಬೇನಾಮಿ ಹಣಕ್ಕೆ ಕಡಿವಾಣ ಬಿದ್ದಿದೆ. ನೋಟು ನಿಷೇಧದ ಮೂಲಕ ಭ್ರಷ್ಟರಿಗೆ ಅವರು ಸಿಂಹ