ಚಿಕ್ಕಬಳ್ಳಾಪುರ : ಮುಂದಿನ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ. ಈ ಸಿದ್ಧತೆಯ ಭಾಗವಾಗಿ ದೊಡ್ಡಬಳ್ಳಾಪುರದಲ್ಲಿ ಇಂದು ಬೃಹತ್ ಜನಸ್ಪಂದನ ಸಮಾವೇಶ ಆಯೋಜಿಸಲಾಗಿದೆ.ಜನಸ್ಪಂದನ ಸಮಾವೇಶದ ಮೂಲಕ 2023ರ ಚುನಾವಣೆಗೆ ರಾಜ್ಯ ಬಿಜೆಪಿ ದೊಡ್ಡಬಳ್ಳಾಪುರದಿಂದ ಕಹಳೆ ಮೊಳಗಿಸುತ್ತಿದೆ. 40 ಎಕರೆ ಮೈದಾನದಲ್ಲಿ ಜನಸ್ಪಂದನ ಕಾರ್ಯಕ್ರಮ ಬೃಹತ್ ವೇದಿಕೆ ಸಿದ್ಧವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಯನ್ನು ಸಿಎಂ ಬೊಮ್ಮಾಯಿ ಜನರ ಮುಂದಿಡಲಿದ್ದಾರೆ.ಜನಸ್ಪಂದನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿ