ಕೊಯಮತ್ತೂರು (ಆ.04): ಮೇಕೆದಾಟು ಅಣೆಕಟ್ಟು ವಿಷಯದಲ್ಲಿ ತಮಿಳುನಾಡು ಬಿಜೆಪಿ ಘಟಕ ಡಬ್ಬಲ್ ಆ್ಯಕ್ಟಿಂಗ್ ಮಾಡುತ್ತಿದೆ ಎಂದು ಮಕ್ಕಳ್ ನೀಧಿ ಮಯ್ಯಂ ಪಕ್ಷದ ನೇತಾರ, ನಟ ಕಮಲ್ಹಾಸನ್ ವ್ಯಂಗ್ಯವಾಡಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಒಂದೆಡೆ ತಮಿಳುನಾಡು ಬಿಜೆಪಿ ಮೇಕೆದಾಟು ಯೋಜನೆಯ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದೆ. ಕರ್ನಾಟಕ ಬಿಜೆಪಿ ಯೋಜನೆಗೆ ಜಾರಿಗೆ ತರಲು ಹವಣಿಸುತ್ತಿದೆ. ಇದು ಬಿಜೆಪಿ ದೇಶದಲ್ಲಿ ಮಾಡುತ್ತಿರುವ ಡಬ್ಬಲ್ ಆಕ್ಟಿಂಗ್’. ‘ನಾನು ನಟನಾಗಿ 25ಕ್ಕೂ ಹೆಚ್ಚು ಚಿತ್ರದಲ್ಲಿ