ರಾಜ್ಯದಲ್ಲಿ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಎರಡನೇ ಸಲ ಆಪರೇಷನ್ ಕಮಲ ನಡೆಯೋ ಸಾಧ್ಯತೆ ಕಂಡುಬರುತ್ತಿದೆ. ಡಿಸಿಎಂ ಗೋವಿಂದ ಕಾರಜೋಳರ ಪುತ್ರ ಕಾಂಗ್ರೆಸ್ ಶಾಸಕ ಡಿ.ಎಸ್.ಹೂಲಗೇರಿಯವರನ್ನು ಭೇಟಿ ಮಾಡಿರೋದು ಈ ಚರ್ಚೆಗೆ ಕಾರಣವಾಗಿದೆ.ಬೈ ಎಲೆಕ್ಷನ್ ಫಲಿತಾಂಶದಿಂದ ಬಿಜೆಪಿಗೆ ನಷ್ಟವಾಗುವ ಲಕ್ಷಣಗಳು ಕಂಡುಬಂದರೆ ಮತ್ತೆ ಆಪರೇಷನ್ ಕಮಲಕ್ಕೆ ಬಿಜೆಪಿ ಕೈಹಾಕುವ ಸಾಧ್ಯತೆ ದಟ್ಟವಾಗಿದೆ.ಬಿಜೆಪಿ ಮಟ್ಟಿಗೆ ರಾಯಚೂರು ಆಪರೇಷನ್ ಕಮಲದ ಕರ್ಮಭೂಮಿಯಾಗಿದೆ ಎಂದು ವದಂತಿಗಳು ಹರಿದಾಡುತ್ತಿವೆ.