ಮಂಡ್ಯ : ಬಿಜೆಪಿ ಅಧಿಕಾರಕ್ಕೆ ಬಂದ್ರೆ 3 ಸಿಲಿಂಡರ್ ಕೊಡ್ತೀನಿ ಅಂತಾ ಹೇಳಿದೆ. ನಮ್ಮ ಸರ್ಕಾರ ಬಂದ್ರೆ 5 ಸಿಲಿಂಡರ್ ಕೊಡ್ತೀನಿ ಅಂತಾ ಹೇಳಿರುವುದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಹೇಳಿದ ಮೇಲೆ ಬಿಜೆಪಿಯವರು ಹೇಳಿದ್ದಾರೆ. ಕೊಡುವುದಿದ್ದರೇ ಸರ್ಕಾರ ಇದ್ದಾಗಲೇ ಕೊಡಬೇಕಿತ್ತು ಎಂದು ಕುಟುಕಿದ್ದಾರೆ. ದೇವೇಗೌಡರು ಆರೋಗ್ಯದ ಸಮಸ್ಯೆ ನಡುವೆ ನನ್ನ ಏಕಾಂಗಿ ಹೋರಾಟವನ್ನು ಅವರು ಗಮನಿಸಿದ್ದಾರೆ.