ಬಿಜೆಪಿಯ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ವಿಧಿವಶರಾಗಿದ್ದಾರೆ. ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಬಿ.ಬಿ. ಶಿವಪ್ಪ ಬೆಂಗಳೂರಿನ ಸುಗುಣ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಬಿ.ಬಿ. ಶಿವಪ್ಪ ಸಕಲೇಶಪುರದ ಹುಟ್ಟುರಿನಲ್ಲೂ ಕೊನೆಯ ದಿನಗಳನ್ನ ಕಳೆಯಲು ಇಚ್ಛಿಸಿದ್ದರು. ಆಸ್ಪತ್ರೆಯಿಂದ ಅವರನ್ನ ಹುಟ್ಟೂರಿಗೆ ಕರೆದೊಯ್ಯಲು ತಯಾರಿ ನಡೆಸುತ್ತಿದ್ದ ವೇಳೆಯೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನೇರ, ನಿಷ್ಠೂರ ನಡೆಗೆ ಖ್ಯಾತರಾಗಿದ್ದ ಬಿ.ಬಿ. ಶಿವಪ್ಪ ರಾಜ್ಯದಲ್ಲಿ ಬಿಜೆಪಿಯನ್ನ ತಳಮಟ್ಟದಿಂದ ಕಟ್ಟಿದ ಪ್ರಮುಖ ನಾಯಕರು.1994, 1999ರಲ್ಲಿ ಸಕಲೆಶಪುರದಿಂದ ವಿಧಾನಸಭೆಗೆ