ಬೆಂಗಳೂರು: ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ನಡೆದ ಕಬ್ಬು ಬೆಳೆಗಾರರ ಪ್ರತಿಭಟನೆ ನಡುವೆ ಮಹಿಳೆಯೊಬ್ಬರು ತಮ್ಮ ವಿರುದ್ಧ ಟೀಕಿಸಿದ್ದಕ್ಕೆ ನಾಲ್ಕು ವರ್ಷ ಎಲ್ಲಿ ಮಲಗಿದ್ದೆಯಮ್ಮ. ಈಗ್ಯಾಕೆ ಪ್ರತಿಭಟನೆ ಮಾಡ್ತಿದ್ದೀಯಾ ಎಂದು ಪ್ರಶ್ನಿಸಿದ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.ನಿನ್ನೆ ಬೆಂಗಳೂರಿನ ಕೃಷಿ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಹಸಿರು ಶಾಲು ಹೊದ್ದ ಮಹಿಳೆಯೊಬ್ಬಳು ನಾನು ಮುಖ್ಯಮಂತ್ರಿಯಾಗಲು ನಾಲಾಯಕ್ ಎಂದು ಪ್ರತಿಭಟನೆ ನಡೆಸಿದ್ದಾಳೆ. ಈಕೆ ಇದುವರೆಗೆ ಹೊಲಕ್ಕೆ ಹೋಗಿದ್ದಾಳೋ