ಬೇಗ್ ಜೊತೆ ಬಿಎಸ್ ವೈ ಪಿ.ಎ.ಸಂತೋಷ್ ಇದ್ದಾರೆ ಎಂಬುದು ಸುಳ್ಳು ಆರೋಪ-ಸಿಎಂ ವಿರುದ್ಧ ಕಿಡಿಕಾರಿದ ಬಿಜೆಪಿ

ಬೆಂಗಳೂರು, ಮಂಗಳವಾರ, 16 ಜುಲೈ 2019 (09:13 IST)

ಬೆಂಗಳೂರು : ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಎಸ್‌ ಐಟಿ ವಶಕ್ಕೆ ಪಡೆದ ಹಿನ್ನಲೆಯಲ್ಲಿ ಸಿಎಂ ಕುಮಾರಸ್ವಾಮಿ ಮಾಡಿದ ಆರೋಪವೊಂದಕ್ಕೆ ಇದೀಗ ಬಿಜೆಪಿ ನಾಯಕರು ಟ್ವೀಟರ್ ನಲ್ಲಿ ಕಿಡಿಕಾರಿದ್ದಾರೆ.
“ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಜೊತೆಗೆ ರೋಷನ್ ಬೇಗ್ ಮುಂಬೈಗೆ ಚಾರ್ಟರ್ಡ್ ವಿಮಾನದಲ್ಲಿ ಹೊರಟಿದ್ದರು. ಈ ವೇಳೆ ರೋಷನ್ ಬೇಗ್ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ಪರಾರಿಯಾಗಿದ್ದಾರೆ. ಬಿಜೆಪಿ ಮುಖಂಡ ಯೋಗೇಶ್ವರ್ ಜೊತೆಗಿದ್ದರು. ಇದು ಬಿಜೆಪಿಯ ಕುದುರೆ ವ್ಯಾಪಾರ ಬಿಂಬಿಸುತ್ತದೆ” ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.


ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕರು, “ಜುಲೈ 19 ರಂದು ಎಸ್‌ ಐಟಿ ವಿಚಾರಣೆಗೆ ಹಾಜರಾಗಲು ರೋಷನ್ ಬೇಗ್ ಅವರಿಗೆ ಸಮಯ ನೀಡಲಾಗಿದೆ. ಆದರೆ ಈ ವಿಚಾರದಲ್ಲಿ ಸರ್ಕಾರ ತನ್ನ ಸ್ವಂತ ಶಾಸಕರಿಗೆ ಬ್ಲಾಕ್ ಮೇಲ್ ಮಾಡುತ್ತಿದೆ. ರಾಜ್ಯ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆ. ರೋಶನ್ ಬೇಗ್ ಅವರೊಂದಿಗೆ ಸಂತೋಷ್ ಪ್ರಯಾಣಿಸುತ್ತಿದ್ದರು ಎಂಬುದು ಸುಳ್ಳಾಗಿದೆ. ಸುಳ್ಳು ಸುದ್ದಿ ಸೃಷ್ಟಿಸಿ ಸಿಎಂ ರಾಜ್ಯವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಸತ್ಯ ಸಂಗತಿ ತಿಳಿಯಲು ಬೋರ್ಡಿಂಗ್ ಪಾಸ್ ಮತ್ತು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಎಂದು ಆಗ್ರಹಿಸಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

24 ಗಂಟೆಯೊಳಗೆ ಭಾರತಕ್ಕೆ ಬರುವೆ ಎಂದ ಮನ್ಸೂರ್ ಖಾನ್

ಬಹುಕೋಟಿ ವಂಚನೆ ಹಗರಣದ ಪ್ರಮುಖ ಆರೋಪಿ ಐಎಂಎ ಸಂಸ್ಥೆಯ ಮನ್ಸೂರ್ ಖಾನ್ 24 ಗಂಟೆಯೊಳಗೆ ಭಾರತಕ್ಕೆ ಬರೋದಾಗಿ ...

news

ಐಎಂಎ ಹಗರಣ: SIT ವಿಚಾರಣೆಗೆ ಹಾಜರಾಗೊಲ್ಲ ಎಂದರಾ ರೋಷನ್ ಬೇಗ್?

ಬಹುಕೋಟಿ ವಂಚನೆಯ ಐಎಂಎ ಸಂಸ್ಥೆಯ ಕೇಸ್ ವಿಚಾರಣೆಗಾಗಿ ಎಸ್ ಐ ಟಿ ಎರಡು ಬಾರಿ ನೋಟಿಸ್ ಜಾರಿಮಾಡಿದರೂ ರೋಷನ್ ...

news

‘ವಿಶ್ವಾಸಮತ ಗೆದ್ದೇ ಗೆಲ್ತೀವಿ ಎಂದ ಡಿಕೆ ಶಿವಕುಮಾರ್’

ಮೈತ್ರಿ ಸರಕಾರ ಸುಭದ್ರವಾಗಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಲಿರೋ ವಿಶ್ವಾಸಮತದಲ್ಲಿ ...

news

ಸರಕಾರ ಉಳಿಯುತ್ತಾ? ಉರುಳುತ್ತಾ? - ವಿಶ್ವಾಸಮತ ಯಾಚನೆಗೆ ಮುಹೂರ್ತ ಫಿಕ್ಸ್

ವಿಧಾನಸಭಾ ಕಲಾಪ ಸಲಹಾ ಸಮಿತಿಯು ಮೈತ್ರಿ ಸರಕಾರದ ಮುಖ್ಯಮಂತ್ರಿಯು ಜುಲೈ 18ರಂದು ವಿಶ್ವಾಸಮತ ಯಾಚನೆಯ ...