ಕೋಮುವಾದಿ ಹೆಗ್ಡೇವಾರ್ ಭಾಷಣವನ್ನು ಶಾಲಾ ಮಕ್ಕಳ ಪಾಠ್ಯದಲ್ಲಿ ಸೇರಿಸುವ ಮೂಲಕ ಬಿಜೆಪಿ ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ. ದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣ ಮಕ್ಕಳಿದ್ದಾಗಲೇ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ತಂದಿರೋದೇ ಈ ಕಾರಣಕ್ಕೆ ಎಂದರು. ಹೆಗ್ಡೇವಾರ್ ಕೋಮುವಾದ ಪ್ರತಿನಿಧಿಸುವ ಸಂಘಟನೆ ಮುಖ್ಯಸ್ಥರಾಗಿದ್ದರು. ಈ ರೀತಿಯವರು, ನಕ್ಸಲರು