ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವನ್ನು ಬಿಜೆಪಿ ಮತ್ತೆ ಕೆದಕಿದ್ದು, ಇದರ ಬಗ್ಗೆ ಸೊಲ್ಲೆತ್ತದ ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದೆ.ಅಧಿಕಾರಕ್ಕೆ ಬಂದು ಐದು ತಿಂಗಳಾಯಿತು. ರಾಜ್ಯದಲ್ಲಿ ಒಂದು ಕುಟುಂಬ ಆಡಳಿತ ಮಾಡುತ್ತಿದೆ. ರಾಜ್ಯದಲ್ಲಿ ಸರ್ಕಾರವೇ ಇದ್ದ ಹಾಗೆ ಕಾಣುತ್ತಿಲ್ಲ ಎಂದು ಬಿಜೆಪಿ ಟ್ವಿಟರ್ ನಲ್ಲಿ ಟಾಂಗ್ ಕೊಟ್ಟಿದೆ.ಅಲ್ಲದೆ, ರಾಜ್ಯ ಉಪಚುನಾವಣೆಗಳೆಲ್ಲಾ ಮುಗಿದವು. ನೀವೂ ಸಾಕಷ್ಟು ವಿಶ್ರಾಂತಿ ಪಡೆದಿದ್ದೀರಿ ಅಂದುಕೊಳ್ಳುತ್ತೇವೆ. ಇನ್ನಾದರೂ ನಿಮಗೆ ಸಚಿವ ಸಂಪುಟ ವಿಸ್ತರಣೆ ಮಾಡಲು ಏನೂ