ಬೆಂಗಳೂರು: ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳಿಂದ ಉತ್ಸಾಹಗೊಂಡಿರುವ ಬಿಜೆಪಿ ರಾಷ್ಟ್ರೀಯ ನಾಯಕರ ಮುಂದಿನ ಟಾರ್ಗೆಟ್ ಕರ್ನಾಟಕವಾಗಿರಲಿದೆ. ಗುಜರಾತ್ ಬಳಿಕ ಬಿಜೆಪಿಗೆ ದೊಡ್ಡ ಟಾರ್ಗೆಟ್ ಇರುವುದು ಕರ್ನಾಟಕ ವಿಧಾನಸಭೆ ಚುನಾವಣೆ. ಇದಕ್ಕಾಗಿ ತಯಾರಿ ನಡೆಸಲು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಗುಜರಾತ್, ಉತ್ತರ ಪ್ರದೇಶದಲ್ಲಿ ರಣ ತಂತ್ರ ರೂಪಿಸಿ ಯಶಸ್ಸು ಕಂಡ ಭೂಪೇಂದ್ರ ಯಾದವ್, ಅರುಣ್ ಸಿಂಗ್ ಮುಂತಾದವರು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.ಇಲ್ಲಿನ ನಾಯಕರೊಂದಿಗೆ ಚರ್ಚಿಸಿ