ಬಿಜೆಪಿ ನಾಯಕರು ಯಾತ್ರೆ ಮಾಡಿದಷ್ಟು ನಮಗೆ ಲಾಭವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪರಿವರ್ತನೆ ಯಾತ್ರೆಗೆ ಜನತೆ ಬಾರದೇ ವಿಫಲಗೊಳಿಸಿದ್ದಾರೆ. ಬಿಜೆಪಿ ಯಾತ್ರೆ ಮಾಡಿದರೆ ನಮಗೇನು ಲಾಭವೆಂದು ಕೇಳುತ್ತಿರುವುದಾಗಿ ತಿಳಿಸಿದ್ದಾರೆ. ಯಡಿಯೂರಪ್ಪಗೆ ಈಗಾಗಲೇ ಜನತೆ ಬುದ್ದಿ ಕಲಿಸಿದ್ದಾರೆ. ಆದಾಗ್ಯೂ ಬಿಜೆಪಿ ನಾಯಕರು ಬುದ್ದಿಕಲಿಯುವ ಮನಸ್ಥಿತಿಯವರು ಎಂದು ನಾನು ಭಾವಿಸಿಲ್ಲ. ಆದರೆ, ಮುಂಬರುವ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಿದ ನಂತರ ಬುದ್ದಿ ಕಲಿಯುತ್ತಾರೆ