ಸಿದ್ದರಾಮಯ್ಯರು ಮತ್ತೆ ಬ್ಲ್ಯಾಕ್ಮೇಲ್ ತಂತ್ರ ಅನುಸರಿಸಿದ್ದಾರೆ. ಮೊನ್ನೆ ಸೋನಿಯಾ ಗಾಂಧಿಯವರಿಗೆ ಫೋನ್ ಮಾಡಿ ತಮ್ಮನ್ನೇ ಸಿಎಂ ಮಾಡಬೇಕು. ಇಲ್ಲವಾದರೆ ತಮ್ಮ ದಾರಿ ತಾವು ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಅದಕ್ಕೆ ಹೈಕಮಾಂಡ್ಗೆ ಈ ಪರಿಸ್ಥಿತಿ ನಿಭಾಯಿಸಲು ಕಷ್ಟವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟಿದ್ದಾರೆ.ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಅವರು, 2009ರಲ್ಲಿ ಸಂಸತ್ತಿನ ಚುನಾವಣೆಗೆ ಮೊದಲು ಅವರು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಬೆದರಿಸಿದ್ದರು. ವಿರೋಧ