ಮಂಗಳೂರು: ಮಹಿಳೆಯೊಬ್ಬರ ಖಾಸಗಿ ಚಿತ್ರಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಪುತ್ತಿಗೆ ಗ್ರಾಮದ ನಿವಾಸಿ ವಿಜಯ ಗೌಡ (33) ಬಂಧಿತ ಆರೋಪಿ. ಆರೋಪಿ ಮಹಿಳೆಯ ಮನೆಗೆ ಕೂಲಿ ಕೆಲಸಕ್ಕೆ ಬರುತ್ತಿದ್ದು, ಈ ಸಂದರ್ಭ ಮಹಿಳೆಯ ಮೊಬೈಲ್ ನಂಬರ್ ಪಡೆದಿದ್ದ. ಇದಾದ ನಂತರ ಮಹಿಳೆಯ ಜತೆ ಸಲುಗೆ ಬೆಳೆಸಿದ್ದ ಆರೋಪಿ ಮಹಿಳೆಯ ಬಳಿ ಆಕೆಯ ಖಾಸಗಿ ಪೋಟೋ ಕಳುಹಿಸುವಂತೆ ಒತ್ತಡ ಹೇರಿದ್ದಾನೆ. ಇದಕ್ಕೆ ಮಹಿಳೆ