ಫುಡ್ ಪ್ರಾಡೆಕ್ಟ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಸಜೀವದಹನಗೊಂಡು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಬೆಂಗಳೂರಿನ ಮಾಗಡಿ ರಸ್ತೆಯ ಅಂಜನ್ ಟಾಕೀಸ್ ಬಳಿ ಮಂಗಳವಾರ ಮಧ್ಯಾಹ್ನ ಈ ದುರ್ಘಟನೆ ಸಂಭಣವಿಸಿದ್ದು, ಕಾರ್ಖಾನೆ ಮಾಲೀಕ ಸಚಿನ್ ಹಾಗೂ ಮೂವರು ಮಹಿಳೆಯರಿಗೆ ಗಾಯವಾಗಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಹಾರ ಮೂಲದ ಮನೀಶ್, ಸೌರಭ್ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಯ ಧನಲಕ್ಷ್ಮೀ, ಶಾಂತಿ ಎಂಬುವವರಿಗೂ ಗಾಯಗಳಾಗಿವೆ.