ಬೆಂಗಳೂರು: ಡಿಪೋ ಮ್ಯಾನೇಜರ್ ಪ್ರಕಾಶ್ ಕಿರುಕುಳಕ್ಕೆ ಬೇಸತ್ತು ಬಿಎಂಟಿಸಿ ಡ್ರೈವರ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಡಿಪೋ ನಂ. 2 ಶಾಂತಿನಗರದಲ್ಲಿ ನಡೆದಿದೆ. ನಿನ್ನೆ ರಾತ್ರಿ ಬಿಎಂಟಿಸಿ ಚಾಲಕ ಮಧು ಶಾಂತಿನಗರ ಡಿಪೋ ಗೇಟ್ ಬಳಿ ಜಿರಳೆ ಔಷಧಿ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅಸ್ವಸ್ಥಗೊಂಡಿರುವ ಚಾಲಕ ಮಧುರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗ್ತಿದೆ.ನಿನ್ನೆ ಮಧ್ಯಾಹ್ನ ಚಾಲಕ ಮಧು ಶಿಫ್ಟ್ ಗೆ ಬಂದಾಗ ಟ್ಯೂಟಿ ನೀಡದೆ, ಡಿಪೋ ಮ್ಯಾನೇಜರ್ ಪ್ರಕಾಶ್ ಮೆಮೋ