ಇಂದು ಮಧ್ಯಾಹ್ನದಿಂದಲೇ ಬಿಎಂಟಿಸಿ ಬಸ್ ರಸ್ತೆಗಿಳಿಯೋದು ಡೌಟ್

ಬೆಂಗಳೂರು| Krishnaveni K| Last Modified ಮಂಗಳವಾರ, 6 ಏಪ್ರಿಲ್ 2021 (09:56 IST)
ಬೆಂಗಳೂರು: ತಮ್ಮ ಬೇಡಿಕೆ ಈಡೇರಿಕೆಗೆ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಸಾರಿಗೆ ನೌಕರರು ಇಂದು ಮಧ್ಯಾಹ್ನದಿಂದಲೇ ಮುಷ್ಕರ ಆರಂಭಿಸುವ ಸಾಧ‍್ಯತೆಯಿದೆ.

 
ಇಂದು ಮಧ್ಯಾಹ್ನದಿಂದಲೇ ಬಿಎಂಟಿಸಿ ಬಸ್ ಗಳು ರಸ್ತೆಗಿಳಿಯೋದು ಅನುಮಾನವಾಗಲಿದೆ. ನಾಳೆಯಿಂದ ಅಧಿಕೃತವಾಗಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ನೌಕರರು ಹೇಳಿದ್ದರೂ ಇಂದು ಮಧ‍್ಯಾಹ್ನದಿಂದಲೇ ಬಸ್ ಗಳಲ್ಲಿ ವ್ಯತ್ಯಯವಾಗುವ ಸಾಧ‍್ಯತೆಯಿದೆ.
 
ಇದುವರೆಗೆ ಹಲವು ಸರ್ಕಾರಗಳು ಬಂದು ಹೋಗಿವೆ. ಆದರೆ ಯಾವ ಸರ್ಕಾರವೂ ನಮ್ಮ ಬೇಡಿಕೆ ಈಡೇರಿಸಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ನಾವು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ನೌಕರರು ಹೇಳಿದ್ದಾರೆ. ಹೀಗಾಗಿ ನಿಮ್ಮ ಪೂರ್ವ ನಿಗದಿತ ಪ್ರಯಾಣಗಳಿದ್ದರೆ ಮುಂದೂಡುವುದು ಉತ್ತಮ.
ಇದರಲ್ಲಿ ಇನ್ನಷ್ಟು ಓದಿ :