ಚಿಲ್ಲರೆ ಕೇಳಿದ ಮಹಿಳೆ ಮೇಲೆ ಬಿಎಂಟಿಸಿ ಬಸ್ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ನಿನ್ನೆ ರಾತ್ರಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ. 250ಜೆ ಬಸ್`ನಲ್ಲಿ ಬಂದ ಲಕ್ಷ್ಮೀ ಎಂಬ ಮಹಿಳೆ ಮಗುವಿನ ಜೊತೆ ಮೆಜೆಸ್ಟಿಕ್`ನಲ್ಲಿ ಇಳಿದಿದ್ದಾರೆ. 80 ರೂಪಾಯಿ ಚಿಲ್ಲರೆ ಕೊಡಬೇಕಿದ್ದ ಕಂಡಕ್ಟರ್ 74 ರೂ. ಮಾತ್ರ ನೀಡಿದ್ದಾನೆ. ಉಳಿದ ಚಿಲ್ಲರೆ ಕೊಡು ಎಂದು ಕೇಳಿದಾಗ ಮಾತಿಗೆ ಮಾತು ಬೆಳೆದು ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.ಪ್ರಕರಣ