ಬೆಂಗಳೂರು: ಸರ್ಕಾರದ ವಿರುದ್ಧ ಸಾರಿಗೆ ನೌಕರರು ಸಿಡಿದೆದ್ದು ಮುಷ್ಕರ ಮಾಡಿದ್ದರಿಂದ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದೆ. ಕಳೆದ ಎರಡು ದಿನದಿಂದ ಸರಿಯಾಗಿ ಬಸ್ ಸಂಚಾರವಾಗುತ್ತಿಲ್ಲ. ಇದರಿಂದಾಗಿ ಕೆಎಸ್ ಆರ್ ಟಿಸಿಗೆ 13 ಕೋಟಿ ರೂ. ಮತ್ತು ಬಿಎಂಟಿಸಿಗೆ 7 ಕೋಟಿ ರೂ. ನಷ್ಟವಾಗಿದೆ. ಇಂದು ಪೊಲೀಸ್ ಭದ್ರತೆಯಲ್ಲಿ 50 ಕ್ಕೂ ಹೆಚ್ಚು ಬಸ್ ಗಳು ನಗರದಲ್ಲಿ ಸಂಚಾರ ನಡೆಸಿವೆ. ಬಸ್ ಸಂಚಾರವಿಲ್ಲದೇ ಸಾರ್ವಜನಿಕರು