ಪ್ರಯಾಣಿಕೆರಿಗೆ ಸಿಹಿ ಸುದ್ದಿ! ಸದ್ಯಕ್ಕೆ ಏರಿಕೆಯಾಗಲ್ಲ ಬಿಎಂಟಿಸಿ ಟಿಕೆಟ್ ದರ

ಬೆಂಗಳೂರು| Krishnaveni K| Last Modified ಬುಧವಾರ, 9 ಜೂನ್ 2021 (08:48 IST)
ಬೆಂಗಳೂರು: ಲಾಕ್ ಡೌನ್ ಮುಕ್ತಾಯದ ಬಳಿಕ ಬಿಎಂಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗುತ್ತದೆಂಬ ಸುದ್ದಿಯನ್ನು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಳ್ಳಿ ಹಾಕಿದ್ದಾರೆ.

 
ಆರ್ಥಿಕ ಸಂಕಷ್ಟದಲ್ಲಿರುವ ಸಾರಿಗೆ ಸಂಸ್ಥೆ ಬಸ್ ಟಿಕೆಟ್ ದರ ಶೇ.18 ರಿಂದ 20 ರವರೆಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಸದ್ಯಕ್ಕೆ ಈ ಪ್ರಸ್ತಾವನೆ ಪರಿಗಣಿಸದೇ ಇರಲು ಸರ್ಕಾರ ತೀರ್ಮಾನಿಸಿದೆ.
 
ಸಾರಿಗೆ ಬಸ್ ಗಳಲ್ಲಿ ಸಾಮಾನ್ಯ, ಬಡ ವರ್ಗದ ಜನರೇ ಸಂಚರಿಸುತ್ತಾರೆ. ಸದ್ಯಕ್ಕೆ ಕೊರೋನಾ, ಲಾಕ್ ಡೌನ್ ನಿಂದಾಗಿ ಎಲ್ಲರೂ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಬಸ್ ದರ ಏರಿಕೆ ಮಾಡಿ ಸಾಮಾನ್ಯರಿಗೆ ಕಷ್ಟ ಕೊಡಲ್ಲ ಎಂದು ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :