ಚಲನಚಿತ್ರ ನಟರ ಮನೆಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆಗಳು ಬರುವುದು ಮತ್ತೆ ಮರುಕಳಿಸಿದೆ. ತಮಿಳುನಾಡಿನಲ್ಲಿ ನಟ ತಲಾ ಅಜಿತ್ ನಿವಾಸಕ್ಕೆ ಬಾಂಬ್ ಇಡಲಾಗಿದೆ ಎಂಬ ಕರೆ ಮಾಡಲಾಗಿತ್ತು. ಕರೆಯ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು, ಮನೆಯನ್ನೆಲ್ಲಾ ಶೋಧಿಸಿದರೂ ಬಾಂಬ್ ಪತ್ತೆಯಾಗಲಿಲ್ಲ. ಇದೊಂದು ಹುಸಿ ಬಾಂಬ್ ಕರೆಯಾಗಿದೆ ಎನ್ನುವುದನ್ನು ಪೊಲೀಸರು ಕಂಡು ಕೊಂಡಿದ್ದಾರೆ. ತಮಿಳುನಾಡಿನಲ್ಲಿ ನಟರ ಮನೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಆಗಾಗ್ಗೆ ಹುಸಿ ಬೆದರಿಕೆ ಕರೆಗಳು ಬರುತ್ತಲೇ ಇವೆ.