ಗದಗ : ಬಿಜೆಪಿ ಸರ್ಕಾರ, ಹಗರಣಗಳ ಸರ್ಕಾರ. ಸಿ.ಎಂ.ಬೊಮ್ಮಾಯಿ ಅವರು ಎಲೆಕ್ಟೆಡ್ ಸಿಎಂ ಅಲ್ಲ, ಅಪಾಯಿಂಟೆಡ್ ಸಿಎಂ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದರು.ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮೆಡ್ಲೇರಿ ಸಿದ್ದೇಶ್ವರ ದೇವಸ್ಥಾನ ಉದ್ಘಾಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಹುದ್ದೆ ಅಕ್ರಮದ ಕುರಿತು ಸರ್ಕಾರದ ವಿರುದ್ಧ ಹರಿಹಾಯ್ದರು.ಬೊಮ್ಮಾಯಿ ಅವರೇ ಪೊಲೀಸ್ ಆಫೀಸರ್ಗಳನ್ನು ಯಾಕೆ ಟ್ರಾನ್ಸ್ಫರ್ ಮಾಡಿದ್ರಿ? ಅಕ್ರಮ ನಡೆದಿದೆಯೋ ಇಲ್ವೊ? ಅಕ್ರಮ ನಡೆದಿಲ್ಲ ಅನ್ನೋದಾದ್ರೆ ಲಿಸ್ಟ್ ಯಾಕೆ