ಹಾವೇರಿ : ನೂರಾರು ಮುಸಲ್ಮಾನರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಬಿಜೆಪಿಯನ್ನು ಸೇರ್ಪಡೆಯಾದರು. ಶಿಗ್ಗಾವಿವಿಧಾನಸಭಾ ಕ್ಷೇತ್ರದ ಬಂಕಾಪುರದಲ್ಲಿ ನೂರಾರು ಮುಸಲ್ಮಾನರನ್ನು ಸಿಎಂ ಬೊಮ್ಮಾಯಿ ಶಾಲು ಹಾಕಿ ಬಿಜೆಪಿಗೆ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಬೊಮ್ಮಾಯಿ, ನಮ್ಮ, ನಿಮ್ಮ ಸಂಬಂಧಗಳು ಬಹಳ ಒಳ್ಳೆಯದಾಗಿದೆ.ನಾವೆಲ್ಲರೂ ಅಣ್ಣ, ತಮ್ಮಂದಿರ ಹಾಗೇ ಇದ್ದೇವೆ. ಬಂಕಾಪುರದ ಜನರು ನಮ್ಮ ಸಂಬಂಧಗಳಿಗೆ ಬೆಲೆ ಕೊಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರಿಗೆ ನಾನು ಹೃದಯಪೂರ್ವಕವಾಗಿ ಸ್ವಾಗತ ಕೋರುತ್ತೇನೆ ಎಂದರು.ಪಕ್ಷ