ಹುಬ್ಬಳ್ಳಿ : ರಾಜ್ಯದ ಹಲವೆಡೆ ಕೊರೊನಾ ಸದ್ದಿಲ್ಲದೇ ಹೆಚ್ಚಾಗಲಾರಂಭಿಸಿದೆ. ಅದರಲ್ಲಿಯೂ ಕೋವಿಡ್ ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ಕೆಲಸ ಮಾಡುವ ಕೊರೊನಾ ವಾರಿಯರ್ಸ್ ಲ್ಲೇ ಹೆಚ್ಚು ಪ್ರಮಾಣದಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಅದರಲ್ಲಿಯೂ ಎರಡು ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿಯೇ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿರೋದು ಆತಂಕಕ್ಕೆ ಕಾರಣವಾಗಿದ್ದು, ಕೊರೋನಾ ವಾರಿಯರ್ಸ್ ಗೆ ಬೂಸ್ಟರ್ ಡೋಸ್ ಕೊಡೋಕೆ ರಾಜ್ಯ ಸರ್ಕಾರ ಮುಂದಾಗಿದೆ. ಕೊರೋನಾ ವಾರಿಯರ್ಸ್ ಗೆ ಶೀಘ್ರವೇ ಬೂಸ್ಟರ್ ಡೋಸ್ ಹಾಕಿಸೋದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.