ಪ್ರಾದೇಶಿಕ ರಾಜ್ಯಗಳಿ ಭಾಷೆವಾರು ಆದಾಗ, ಸಹಜವಾಗಿ ವ್ಯತ್ಯಾಸಗಳು ಬಂದೇ ಬರುತ್ತವೆ. ನಿಖರವಾದ ರೇಖೆಯನ್ನು ಯಾವುದೇ ರಾಜ್ಯ ಅಥವಾ ದೇಶದ ನಡುವೆ ಎಳೆಯಲು ಸಾಧ್ಯವಿಲ್ಲ.ಆದ ಕಾಲಕಳೆದಂತೆ, ವ್ಯತ್ಯಾಸಗಳನ್ನು ಮರೆತು ಸಾಮರಸ್ಯದಿಂದ ಬದುಕುವುದು ಬಹಳ ಮುಖ್ಯ. ಆದರೆ ಈ ರೀತಿ ಆಗಲಿಲ್ಲ ಎಂಬ ಕೊರಗು ಕನ್ನಡಿಗರಿಗಿದೆ. ಗಡಿ ಭಾಗದಲ್ಲಿ ಯಾವುದೇ ಭಾಷೆ ಮಾತನಾಡಿದರು ನೆಮ್ಮದಿಯಿಂದ ಜೀವನ ನಡೆಸುತ್ತಾರೆ.ನಾನು ಬೆಳಗಾವಿ ಅಧಿವೇಶನಕ್ಕೆ ಹೋದಾಗ ಗಡಿ ಭಾಗದ ಗ್ರಾಮಗಳಿಗೆ ಭೇಟಿ ನೀಡಿದಾಗ ಜನರು ಪ್ರೀತಿಯಿಂದ ಮಾತನಾಡುತ್ತಾರೆ.