ನ್ಯಾಯಮೂರ್ತಿ ವೀರಪ್ಪ ಬೌರಿಂಗ್ ಆಸ್ಪತ್ರೆ ಭೇಟಿ ಹಾಗೂ ಅವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿಚಾರದ ಕುರಿತು ಬೆಂಗಳೂರಿನಲ್ಲಿ ಸಚಿವ ಡಾ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಬೌರಿಂಗ್ ಆಸ್ಪತ್ರೆ ಗುಣಮಟ್ಟದ ಆಸ್ಪತ್ರೆಯಾಗಿದೆ. ಹಲವು ವರ್ಷದಿಂದ ಬೆಂಗಳೂರು ಕೇಂದ್ರ ಭಾಗದಲ್ಲಿ ಆರೋಗ್ಯ ಸಂಜೀವಿನಿಯಾಗಿ ಕೆಲಸ ಮಾಡಿದೆ ಎಂದಿದ್ದಾರೆ. ಆಸ್ಪತ್ರೆಯ ಕಟ್ಟಡ ಬಹಳಷ್ಟು ಹಳೆಯದಾಗಿದೆ. ನಮ್ಮ ಸರ್ಕಾರ 500 ಹಾಸಿಗೆ ಹೊಂದಿರುವ ಆಸ್ಪತ್ರೆಯನ್ನು ಮಾಡಲಿದ್ದೇವೆ. ಕೊವಿಡ್ ಸಂದರ್ಭದಲ್ಲಿ ಕೂಡ ಹಾಸಿಗೆ ಹೆಚ್ಚಿಸಿದ್ದೇವೆ ಎಂದು ಸುಧಾಕರ್ ತಿಳಿಸಿದ್ರು.