ಪಾರಿವಾಳಗಳ ಮೇಲಿನ ಆಸೆ ಆ ಬಾಲಕನ ಬದುಕನ್ನೇ ಬಲಿತೆಗೆದುಕೊಂಡಿದೆ.ದೇಗುಲದ ಗೋಪುರದಲ್ಲಿ ಚಿಲಿಪಿಲಿಗುಡುತ್ತಿದ್ದ ಪಾರಿವಾಳಗಳನ್ನು ಹಿಡಿಯಲು ಹೋಗಿದ್ದ ಬಾಲಕನೋರ್ವ ಮೃತಪಟ್ಟ ಘಟನೆ ನಡೆದಿದೆ.ಚಾಮರಾಜನಗರ ಜಿಲ್ಲೆಯ ಚನ್ನಪ್ಪನ್ನಪುರ ವೀರಭದ್ರಸ್ವಾಮಿ ದೇಗುಲದಲ್ಲಿ ಈ ಘಟನೆ ನಡೆದಿದೆ. ಶಿವು(16) ಮೃತಪಟ್ಟ ಬಾಲಕ. ಗುರುವಾರ ರಾತ್ರಿ ದೇವಾಲಯಕ್ಕೆ ತೆರಳಿದ್ದ ವೇಳೆ ಪಾರಿವಾಳಗಳನ್ನು ಹಿಡಿಯಲು ಶಿವು ದೇಗುಲದ ಗೋಪುರ ಏರಿದ್ದಾನೆ. ಆ ವೇಳೆ ಕಾಲು ಜಾರಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.ಬೆಳಗ್ಗೆ ವಾಯು ವಿಹಾರಿಗಳಿಂದ ಬಾಲಕ ಮೃತಪಟ್ಟ