ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವಿಗೀಡಾಗಿರುವ ಘಟನೆ ಮೈಸೂರು ಜಿಲ್ಲೆ ನರಸೀಪುರ ತಾಲ್ಲೂಕಿನ ತಲಕಾಡಿನ ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ. ಲೋಹಿತ್(15), ಯತೀಶ್(13) ಮೃತ ಬಾಲಕರಾಗಿದ್ದು, ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ ರವಿಗೌಡರ ಪುತ್ರರು ಎಂದು ತಿಳಿದುಬಂದಿದೆ. ಸ್ನೇಹಿತರ ಜೊತೆ ಬೆಂಗಳೂರಿನಿಂದ ತಲಕಾಡಿಗೆ ಬಾಲಕರು ಆಗಮಿಸಿದ್ದರು. ಆಳ ನೋಡದೆ ಈಜಲು ನದಿಗೆ ಇಳಿದಿದ್ದ ಬಾಲಕರು ಆಳವಿದ್ದ ಕಡೆಗೆ ಈಜಲು ಹೋಗಿ ಮುಳುಗಿ ಸಾವಿಗೀಡಾಗಿದ್ದಾರೆ.ಇನ್ನು ಈ ವೇಳೆ ಅಲ್ಲೇ ಇದ್ದ ಅಂಬಿಗರಿಂದ 6