ರಾಜಕೀಯ ನಾಯಕರ ಉರಿಗೌಡ-ನಂಜೇಗೌಡ ಜಟಾಪಟಿಗೆ ಕೊನೆಗೂ ಬ್ರೇಕ್ ಬಿದ್ದಿದೆ. ಉರಿಗೌಡ ನಂಜೇಗೌಡ ವಿಚಾರ ಅಪ್ರಸ್ತುತ ಎಂದು ನಿರ್ಮಲಾನಂದನಾಥ ಶ್ರೀಗಳು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಸರಿಯಾದ ಸಂಶೋಧನೆ ಆಗದೆ ವಿಚಾರವನ್ನ ಎಲ್ಲಿ ಬೇಕೋ ಅಲ್ಲಿ ಚರ್ಚಿಸೋದು ಸೂಕ್ತವಲ್ಲ. ಇತಿಹಾಸವನ್ನ ಅರಿತವನು ಮತ್ತೊಂದು ಇತಿಹಾಸ ಸೃಷ್ಟಿಸಲು ಸಾಧ್ಯ. ಇತಿಹಾಸವನ್ನ ಅರಿತವರು ಎಂದರೆ ಆಯಾ ಕಾಲಘಟ್ಟದಲ್ಲಿ ಇದ್ದಂತಹ ವ್ಯಕ್ತಿಗಳು..ಶಿಲಾ ಶಾಸನಗಳು, ತಾಳೆಗರಿಗಳು, ಅಂದಿನ ಸಮಕಾಲಿನ ವ್ಯಕ್ತಿಗಳು ಬರೆದ ಇತಿಹಾಸಗಳು ಸಿಗದೆ