ಶಿವಮೊಗ್ಗ: ಮರು ಮದುವೆಯಾಗಲು ಹೊರಟಿದ್ದ 60 ವರ್ಷದ ವೃದ್ಧನಿಗೆ ಆಂಟಿಯೊಬ್ಬಳು ಪಂಗನಾಮ ಹಾಕಿ, ತಾಳಿ, ಆಭರಣ ಸಮೇತ ಎಸ್ಕೇಪ್ ಆದ ಘಟನೆ ನಡೆದಿದೆ.ಕೆಲವು ತಿಂಗಳುಗಳ ಹಿಂದೆ 60 ವರ್ಷದ ನಂಜುಡಪ್ಪ ಎಂಬವರ ಪತ್ನಿ ತೀರಿಕೊಂಡಿದ್ದಳು. ಈ ವಯಸ್ಸಿನಲ್ಲಿ ಒಂಟಿಯಾಗಿ ಬದುಕುವುದು ಕಷ್ಟವೆಂದು ತಾತ ಇನ್ನೊಂದು ಮದುವೆಯಾಗಲು ವೈವಾಹಿಕ ಅಂಕಣ ಮೂಲಕ ವಧು ಕಂಡುಕೊಂಡಿದ್ದರು.ಅದರಂತೆ ಸಿಗಂದೂರು ದೇವಾಲಯದಲ್ಲಿ ಮದುವೆಗೆ ಎಲ್ಲಾ ಸಿದ್ಧತೆಯೂ ಆಗಿತ್ತು. ಆದರೆ ಅಲ್ಲಿಗೆ ಹೋದಾಗ ಮದುವೆಗೆ ಅವಕಾಶವಿಲ್ಲ ಎಂದರಂತೆ.