ತಮ್ಮ ತಮ್ಮ ಮದುವೆ ದಿನಾಂಕ ಮುಂದೂಡಿಕೆ ಮಾಡಲಾಗಿದೆ ಎಂದು ಆರೋಪಿಸಿ ವಧುಗಳು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಕೊರೊನಾ ಎಫೆಕ್ಟ್ ಜಗತ್ತಿನ ಬಹುತೇಕ ದೇಶಗಳ ಮೇಲೆ ಆಗುತ್ತಲೇ ಇದೆ. ಈ ನಡುವೆ ಇಟಲಿಯಲ್ಲಿ ಕೊರೊನಾ ಕಾರಣದಿಂದಾಗಿ ತಮ್ಮ ಮದುವೆ ಮುಂದೂಡಿಕೆ ಮಾಡಲಾಗುತ್ತಿದೆ. ಹೀಗಂತ ಆರೋಪಿಸಿರುವ ಮದುವೆಯಾಗಬೇಕಿದ್ದ ಯುವತಿಯರೆಲ್ಲ ಸೇರಿ ರೋಮ್ ಸಿಟಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮದುವೆ ಮುಂದೂಡಿಕೆ ಆಗಿದ್ದರಿಂದಾಗಿ ಜೀವನದ ಅಮೂಲ್ಯ ಕ್ಷಣಗಳು ಮುಂದಕ್ಕೆ ಹೋಗುತ್ತಿವೆ ಎಂದು ಯುವತಿಯರು ಕಳವಳ