Widgets Magazine

ಆಸ್ತಿಗೆ ಅಕ್ರಮ ಪ್ರವೇಶ ಮಾಡಿ ಧ್ವಂಸ : ತೂಗುದೀಪ ಪತ್ನಿ ವಿರುದ್ಧ ಸಹೋದರನ ಆರೋಪ

ಮಡಿಕೇರಿ| guna| Last Updated: ಬುಧವಾರ, 9 ಡಿಸೆಂಬರ್ 2015 (16:21 IST)

ತೂಗುದೀಪ ಶ್ರೀನಿವಾಸ್ ಪತ್ನಿ ಮೀನಾ ತೂಗುದೀಪಾ ಶ್ರೀನಿವಾಸ್ ತಮ್ಮ ಮನೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಅವರ ಸಹೋದರ ಚಾಮರಾಜ ನಾಯ್ಡು ಪೊಲೀಸರಿಗೆ ದೂರು ನೀಡಿದ್ದಾರೆ.


ಕೊಡಗು ಜಿಲ್ಲೆ ವೀರಾಜಪೇಟೆಯ ಪೊನ್ನಂಪೇಟೆಯಲ್ಲಿರುವ 3.5 ಗುಂಟೆ ಜಾಗದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಮನೆಯನ್ನು ಧ್ವಂಸ ಮಾಡಿದ್ದರಿಂದ ತಮಗೆ 6 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಚಾಮರಾಜ ನಾಯ್ಡು ದೂರಿನಲ್ಲಿ ಪೊನ್ನಂಪೇಟೆ ಪೊಲೀಸರಿಗೆ ತಿಳಿಸಿದ್ದಾರೆ. ತಮಗೆ ಪಿತ್ರಾರ್ಜಿತವಾಗಿ ಬಂದಿದ್ದ 17 ಸೆಂಟ್ಸ್ ಜಾಗ ಧ್ವಂಸಗೊಳಿಸಿ ಪೀಠೋಪಕರಣ ಒಯ್ದಿದ್ದಾರೆ.ಮೀನಾ, ಪಾರ್ವತಿ, ದಮಯಂತಿ, ಮಕರಂದ ನಾಯ್ಡು
ತಮ್ಮ ಮನೆಗೆ
ಅನುಮತಿಯಿಲ್ಲದೇ ಅಕ್ರಮ ಪ್ರವೇಶ ಮಾಡಿ ನಾಶ ಮಾಡಿದ್ದಾರೆ ಮತ್ತು ಪೀಠೋಪಕರಣಗಳನ್ನು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ತಮ್ಮ ದೂರನ್ನು ಸ್ವೀಕರಿಸಿದ್ದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದೂ ಅವರು ಆರೋಪಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :