ಕೌಟಂಬಿಕ ಕಲಹದಿಂದ ಕೋಪಗೊಂಡ ಅಣ್ಣನೊಬ್ಬ ತನ್ನ ಒಡಹುಟ್ಟಿದ ತಂಗಿಯ ಕತ್ತು ಕೊಯ್ದು ಹಾಡಹಗಲೇ ಹತ್ಯೆ ಮಾಡಿದ ಹೇಯ ಘಟನೆ ವರದಿಯಾಗಿದೆ. ನಗರದ ಎಸ್ಎಸ್ಪುರಂನಲ್ಲಿ, ಸಹೋದರಿ 23 ವರ್ಷ ವಯಸ್ಸಿನ ಅಂಜಲಿ ಮತ್ತು ಸಹೋದರ ದೇವರಾಜ್ ಜಗಳವಾಡಿಕೊಂಡು ಪೊಲೀಸ್ ಠಾಣೆಗೆ ಬಂದಿದ್ದರು ಎನ್ನಲಾಗಿದೆ. ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ಎನ್ಇಪಿಎಸ್ ಪೊಲೀಸ್ ಠಾಣೆಗೆ ದೂರು ನೀಡಲು ಅಂಜಲಿ ತೆರಳಿದ್ದಳು. ಆದರೆ, ಅಲ್ಲಿನ ಪೊಲೀಸರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಲಹೆ