ತಂಗಿಗೆ ಕಿರುಕುಳ ನೀಡುತ್ತಿದ್ದ ಆಕೆಯ ಮಾಜಿ ಪ್ರೇಮಿಯನ್ನು ಕೊಂದ ಅಣ್ಣ

ಮುಂಬೈ| pavithra| Last Modified ಸೋಮವಾರ, 4 ಜನವರಿ 2021 (09:23 IST)
ಮುಂಬೈ : 27 ವರ್ಷದ  ಯುವಕನೊಬ್ಬ ತನ್ನ ಸಹೋದರಿಗೆ ಕಿರುಕುಳ ನೀಡುತ್ತಿದ್ದ ಆಕೆಯ ಮಾಜಿ ಪ್ರೇಮಿಯನ್ನು ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಮೃತ ವ್ಯಕ್ತಿ ಆರೋಪಿಯ ತಂಗಿಯನ್ನು ಪ್ರೀತಿಸುತ್ತಿದ್ದ. ಆದರೆ ಅವರಿಬ್ಬರ ಸಂಬಂಧ ಮುರಿದುಬಿದ್ದ ಬಳಿಕವೂ ಕೂಡ ಆತ ಆರೋಪಿಯ ತಂಗಿ ಹಾಗೂ ತಾಯಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಕೋಪಗೊಂಡ ಆರೋಪಿ ವ್ಯಕ್ತಿಯನ್ನು ಕಲ್ಲಿನಿಂದ ಕ್ರೂರವಾಗಿ ಹೊಡೆದು ಕೊಂದಿದ್ದಾನೆ.

ಈ ಬಗ್ಗೆ ಮೃತನ ಕುಟುಂಬದವರು ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.ಇದರಲ್ಲಿ ಇನ್ನಷ್ಟು ಓದಿ :