ಮದುವೆಗೆ ನಿರಾಕರಿಸಿದ್ದಕ್ಕೆ ತಂಗಿಯನ್ನೇ ಕೊಂದ ಅಣ್ಣ

ರಾಯಚೂರು| Krishnaveni K| Last Modified ಸೋಮವಾರ, 12 ಜುಲೈ 2021 (10:39 IST)
ರಾಯಚೂರು: ಮದುವೆಗೆ ಒಪ್ಪಲಿಲ್ಲವೆಂಬ ಕಾರಣಕ್ಕೆ ಅಣ್ಣನೇ ತಂಗಿಯನ್ನು ಹೊಡೆದು ಹತ್ಯೆ ಮಾಡಿದ ಘಟನೆ ದೇವದುರ್ಗದಲ್ಲಿ ನಡೆದಿದೆ.

 
ಚಂದ್ರಕಲಾ ಎಂಬ 23 ವರ್ಷದ ಯುವತಿ ಮೃತ ದುರ್ದೈವಿ. ಈಕೆಯ ಅಣ್ಣ ಶ್ಯಾಂ ಸುಂದರ್ ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
 
ಜುಲೈ 13 ರಂದು ಚಂದ್ರಕಲಾ ನಿಶ್ಚಿತಾರ್ಥವೆಂದು ನಿಗದಿಯಾಗಿತ್ತು. ಇದಕ್ಕಾಗಿ ಚಿನ್ನ, ಬಟ್ಟೆಯನ್ನೂ ಖರೀದಿಸಲಾಗಿ್ತು. ಆದರೆ ಕೊನೆಯ ಹಂತದಲ್ಲಿ ಯುವತಿ ಮದುವೆಗೆ ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಅಣ್ಣ ಈ ಕೃತ್ಯವೆಸಗಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :