ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅಧಿಕಾರಿಗಳಿಗೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾರೆ. ಸೂಕ್ತ ಪರಿಹಾರ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಹೀಗಂತ ಮಂಡ್ಯದ ಚಿಕ್ಕಸೋಮನಹಳ್ಳಿಯ ರೈತ ಶಿವಸ್ವಾಮಿ ಅವರಿಂದ ಅಧಿಕಾರಿಗಳಿಗೆ ಎಚ್ಚರಿಕೆ ಹಾಕಲಾಗಿದೆ.ಮಂಡ್ಯದ ಸಂತೇಬಾಚಹಳ್ಳಿ ಹೋಬಳಿಯ ಚಿಕ್ಕಸೋಮನಹಳ್ಳಿ ಗ್ರಾಮದ ರೈತರಾದ ಗಾಡಿನಿಂಗೇಗೌಡರ ಪುತ್ರ ಶಿವಸ್ವಾಮಿ, ಸರ್ವೇ ನಂಬರ್ 39 ರಲ್ಲಿ ಎರಡು ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಇಬ್ಬರೂ ಮಕ್ಕಳಿಗೆ ತಲಾ ಒಂದೊಂದು ಎಕರೆ ಭೂಮಿಯನ್ನು ಹಂಚಿದ್ದಾರೆ. ಕೇವಲ ಒಂದು