ಬೆಂಗಳೂರು: ಶಿವಮೊಗ್ಗ ಕ್ಷೇತ್ರದ ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸುತ್ತಿರುವ ಪುತ್ರ ಬಿವೈ ರಾಘವೇಂದ್ರ ಪರ ತಂದೆ, ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಬ್ಯಾಟಿಂಗ್ ನಡೆಸುತ್ತಿದ್ದಾರೆ.ಪುತ್ರನ ಜತೆ ನಾಮಪತ್ರ ಸಲ್ಲಿಕೆ ಸಂದರ್ಭದಿಂದಲೂ ಸಾಥ್ ನೀಡಿರುವ ಯಡಿಯೂರಪ್ಪ ಇದೀಗ ಪುತ್ರನ ಪರ ಟ್ವಿಟರ್ ನಲ್ಲೂ ಪ್ರಚಾರ ನಡೆಸಿದ್ದಾರೆ. ಅಡಿಕೆ ಬೆಳೆಗಾರರ ಸಮಸ್ಯೆ ನಿವಾರಿಸಲು ತಂದೆ ಯಡಿಯೂರಪ್ಪ ಹಾದಿಯಲ್ಲಿ ನಡೆಯಲು ನನ್ನನ್ನು ಬೆಂಬಲಿಸಿ ಎಂದು ಬಿವೈ ರಾಘವೇಂದ್ರ ಮಾಡಿರುವ ಟ್ವೀಟ್ ಗಳನ್ನು ರಿಟ್ವೀಟ್ ಮಾಡುವ ಮೂಲಕ