ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸಿಬಿ ವಿಚಾರಣೆಗೆ ಹಾಜರಾಗಬೇಕಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಗೈರು ಹಾಜರಾಗಿದ್ದಾರೆ. ಇಂದು ಎಸಿಬಿ ಎದುರು ಹಾಜರಾಗುವಂತೆ ಬಿಎಸ್ ವೈಗೆ ಸಮನ್ಸ್ ನೀಡಲಾಗಿತ್ತು. ಆದರೆ ವಿಚಾರಣೆಗೆ ಖುದ್ದಾಗಿ ಹಾಜರಾಗದೇ ಬಿಎಸ್ ವೈ ಪರ ವಕೀಲರು ಹಾಜರಾಗಿದ್ದರು. ವಕೀಲರ ಮೂಲಕ ಬಿಎಸ್ ವೈ ವಿಚಾರಣೆಗೆ ಕಾಲಾವಕಾಶ ಕೇಳಿದ್ದಾರೆ.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಎಸಿಬಿ ಖುದ್ದು ಬಿಎಸ್ ವೈ ಹಾಜರಾತಿಗೆ ಆದೇಶಿಸಿದೆ.