ಬೆಂಗಳೂರು: ಬ್ರೇಕಿಂಗ್ ನ್ಯೂಸ್ ಕೊಡುತ್ತೇನೆಂದು ಹೇಳಿ ಯಥಾವತ್ತು ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ವಿಡಿಯೋ ಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಟ್ವಿಟರ್ ನಲ್ಲಿ ನಗೆಪಾಟಲಿಗೀಡಾಗಿದ್ದಾರೆ. ನಿನ್ನೆ ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್ ಕೊಡುತ್ತೇನೆಂದು ಠುಸ್ ಪಟಾಕಿ ಮಾಡಿದ ಬಿಎಸ್ ವೈ ವಿಡಿಯೋ ನೋಡಿ ಟ್ವಿಟರಿಗರು ನಿಮ್ಮ ಬ್ರೇಕಿಂಗ್ ನ್ಯೂಸ್ ನೋಡಿ ಕಾಂಗ್ರೆಸ್ ನವರು ಬಿಡಿ, ಬಿಜೆಪಿಯವರೇ ಮುಸಿ ಮುಸಿ ನಕ್ಕಿರಬಹುದು ಎಂದು ಲೇವಡಿ ಮಾಡಿದ್ದಾರೆ.ಇನ್ನು ಕೆಲವರು, ನೀವೇ