ಮುಂದಿನ 2 ವರ್ಷ ಯಡಿಯೂರಪ್ಪನರೇ ಸಿಎಂ: ಡಿಸಿಎಂ ಅಶ್ವಥ್ ನಾರಾಯಣ್

bengaluru| geethanjali| Last Updated: ಸೋಮವಾರ, 19 ಜುಲೈ 2021 (16:58 IST)
ಮುಂದಿನ 2 ವರ್ಷಗಳ ಕಾಲ ಯಡಿಯೂರಪ್ಪ ನವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.
ಬೆಂಗಳೂರಿನ ರಾಮನಗರದ ನೂತನ ಜಿಲ್ಲಾಸ್ಪತ್ರೆಯಲ್ಲಿ ಟೊಯೋಟಾ ಕಂಪನಿಯ ಸಿಎಸ್.ಆರ್ ಫಂಡ್ ನಲ್ಲಿ ಸ್ಥಾಪಿಸಿರುವ ಸಿಟಿ ಸ್ಕ್ಯಾನ್ ಘಟಕ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತಾನಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಿಎಂ ಬದಲಾವಣೆ ಕುರಿತ ಆಡಿಯೋ ನನ್ನದಲ್ಲ ಎಂದು ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು.
ಸಿಎಂ ಬದಲಾವಣೆ ವಿಚಾರಕ್ಕೆ ಹೆಚ್ಚು ಮಹತ್ವ ಬೇಡ. ಈ ಬಗ್ಗೆ ಯಾವುದೇ ಗೊಂದಲ, ಸಂಶಯವು ಇಲ್ಲ. ಜುಲೈ 26ರ ನಂತರ ಸಚಿವ ಸಂಪುಟ ಪುನಾರಚನೆ ಬಗ್ಗೆ ಯಾವುದೇ ಚರ್ಚೆ ಇಲ್ಲ, ಅಂದು ನಮ್ಮ ಸರ್ಕಾರದ ಸಾಧನೆ ಬಗ್ಗೆ ಸಂಭ್ರಮಾಚರಣೆ ನಡೆಯಲಿದೆ ಎಂದು ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದರು.
ಇದರಲ್ಲಿ ಇನ್ನಷ್ಟು ಓದಿ :