ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತೆ ಟ್ವಿಟರ್ ನಲ್ಲಿ ಏಟಿಗೆ ಎದಿರೇಟು ಕೊಟ್ಟುಕೊಂಡಿದ್ದಾರೆ.ಮೊದಲು ಟ್ವೀಟ್ ಮಾಡಿದ್ದ ಬಿಎಸ್ ವೈ ಸಿದ್ದರಾಮಯ್ಯ ಸರ್ಕಾರ ಎಲ್ಲಾ ವಿಧದಲ್ಲೂ ವಿಫಲವಾಗಿದೆ ಎಂದು ಟೀಕಿಸಿದ್ದರು. ಇದಕ್ಕೆ ಸರಣಿ ಟ್ವೀಟ್ ಮಾಡಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.ಈ ರಾಜ್ಯವನ್ನು ಅತೀ ಭ್ರಷ್ಟ ರಾಜ್ಯವಾಗಿ ಮಾಡಿದ ವ್ಯಕ್ತಿಯಿಂದ ದೊಡ್ಡ ಮಾತುಗಳೇ ಬರುತ್ತಿವೆ. ಬೆಂಗಳೂರನ್ನು ಕಸದ ತೊಟ್ಟಿ ಮಾಡಿದರು, ರೈತರ ಮೇಲೆ ಗೋಲಿಬಾರ್ ನಡೆಸಿದರು.